ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕ್ಷಣಗಣನೆ..ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶಿಲ್ಪಾ ಶ್ರೀನಿವಾಸ್ ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭ...ಹತ್ತು ಲಕ್ಷ ಬಿಡುಗಡೆ
Posted date: 23 Sat, Sep 2023 09:11:45 AM
ಕನ್ನಡ ಚಿತ್ರರಂಗ ಮಾತೃ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇದೇ 28ಕ್ಕೆ ಫಿಲ್ಮ್ ಚೇಂಬರ್ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಅಧ್ಯಕ್ಷ ಸ್ಥಾನದಲ್ಲಿ ನಿರ್ಮಾಪಕ ಕಂ ವಿತರಕ ಶಿಲ್ಪಾ ಶ್ರೀನಿವಾಸ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರ್ತಿದೆ. ಈಗಾಗ್ಲೇ ಭರದಿಂದ ಪ್ರಚಾರ ನಡೆಸಿರುವ ಶಿಲ್ಪಾ ಶ್ರೀನಿವಾಸ್ ಅವರಿಗೆ ಮಂಡಳಿಗೆ ಅಧ್ಯಕ್ಷರಾದ ಭಾ.ಮಾ.ಹರೀಶ್ ತಂಡ ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದಾರೆ. 

ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿದ ಶಿಲ್ಪಾ ಶ್ರೀನಿವಾಸ್...10 ಲಕ್ಷ ಮೀಸಲು

ವಾಣಿಜ್ಯ ಮಂಡಳಿ ಸದಸ್ಯರ ಕುಟುಂಬ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭಿಸಿರುವ ಶಿಲ್ಪಾ ಶ್ರೀ‌ನಿವಾಸ್, ಅದಕ್ಕಾಗಿ ಹತ್ತು ಲಕ್ಷ ಮೀಸಲಿಟ್ಟಿದ್ದಾರೆ. ಇಡೀ ಚಿತ್ರೋದ್ಯಮಕ್ಕೆ ಈ ಟ್ರಸ್ಟ್ ಬೆಳಕಾಗಲಿ. ಯಾರೇ ಅಧ್ಯಕ್ಷರು ಬಂದರು ಮುಂದುವರೆಸಿಕೊಂಡು ಹೋಗಲಿ.. ತಾವು ಮಂಡಳಿ ಅಧ್ಯಕ್ಷ ಸ್ಥಾನಕ್ಕೇರಿದರೆ ಮೊದಲು ಇದನ್ನು ಜಾರಿಗೆ ತರುತ್ತೇವೆ ಎಂದರು. 
 
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಲ್ಪಾ ಶ್ರೀನಿವಾಸ್,  1976ರಿಂದ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದೇನೆ. ನಿರ್ಮಾಪಕನಾಗಿ, ವಿತರಕನಾಗಿ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದರು.

ಹರೀಶ್ ಕಳೆದ 40 ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿರುವ ಶಿಲ್ಪಾ ಶ್ರೀನಿವಾಸ್, 600ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ , ಶಂಕರ್ ನಾಗ್ , ಅಂಬರೀಶ್, ಶಿವಣ್ಣ ಜೊತೆ ಕೆಲಸ ಮಾಡಿರುವ ಅವರು, ಪ್ರಜಾಪ್ರಭುತ್ವ, ಪರ್ವ, ರೋಮಿಯೊ ಜೂಲಿಯೆಟ್, ಉಪೇಂದ್ರ ಅಂತ ಇನ್ನು ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಝೀರೋನಿಂದ  ನಿರ್ಮಾಪಕನಾಗಿ, ವಿತರಕನಾಗಿ, ಹಂಚಿಕೆದಾರನಾಗಿ ಇಲ್ಲಿಯವರೆಗೂ ಚಿತ್ರರಂಗಕ್ಕೆ ಶ್ರಮಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed